Sunday, September 8, 2013

ಅಣು ಶಕ್ತಿ ದೇಗುಲ

ಅಣು ಶಕ್ತಿ ದೇಗುಲ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅಣು ಕೇಂದ್ರದಲ್ಲಿ ವಾಸಿಸುವ ಪ್ರೋಟಾನು ಮತ್ತು ನ್ಯೂಟ್ರಾನುಗಳು ಸಂಖ್ಯೆಯಲ್ಲಿ ಎಷ್ಟು ಇವೆ ಎನ್ನುವುದರ ಕಾರಣದಿಂದ ಆಣು ಯಾವ ಮೂಲ ವಸ್ತು ಎಂದು ನಿರ್ಧರಿತವಾಗುತ್ತದೆ. ಒಂದೇ ಒಂದು ಪ್ರೋಟಾನು ಮಾತ್ರ ಇದ್ದುಒಂದು ಕೂಡ ನ್ಯೂಟ್ರಾನು ಇಲ್ಲದ್ದಿದ್ದರೆ ಅದು ಜಲಜನಕವಾಗುತ್ತದೆ. ಎರಡು ಪ್ರೋಟಾನುಗಳು ಇದ್ದರೆ ಆ ಅನುವು ಹೀಲಿಯಮ್ ಆಗುತ್ತದೆ. ಹೀಗೆಪೂರ್ಣವಾಗಿ ಎಲ್ಲಾ ಮೂಲ ಅಣುಗಳನ್ನು ತಿಳಿಯ ಬೇಕಾದರೆ ನೀವು ಮೂಲ ಅಣುಗಳ ಪಟ್ಟಿಯನ್ನು ಗಮನದಲ್ಲಿ ಮತ್ತು ವಿಸ್ತಾರವಾಗಿ ಅಧ್ಯಯನ ಮಾಡಬೇಕು. 

ಚಿನ್ನಬೆಳ್ಳಿಇಂಗಾಲತಾಮ್ರಅಲ್ಯೂಮಿನಿಯಮ್ಕಬ್ಬಿಣಸಾರಜನಕಆಮ್ಲಜನಕ ಮುಂತಾದ ಮೂಲ ಅನುಗಲನ್ನುಅವುಗಳಿಂದ ಆಗುವ ಮೂಲ ವಸ್ತುಗಳನ್ನೂ ಅರ್ಥ ಮಾಡಿಕೊಳ್ಳಬಹುದು.

ಹೆಚ್ಚು ಹೆಚ್ಚು ಪ್ರೋಟಾನುಗಳೂನ್ಯೂಟ್ರಾನುಗಳೂ ಅಣುವಿನ ಕೇಂದ್ರದಲ್ಲಿ ಗುಂಪು ಸೇರಿದಾಗಅಣುವಿನ ಸ್ಥಿರತೆಗೆ ಕುಂದು ಬರುತ್ತದೆ. ಉದಾಹರಣೆಗೆಯುರೇನಿಯಮ್ ಮೂಲ ಅಣುಅದರಿಂದ ಆಗುವ ಮೂಲ ವಸ್ತುವು ಅಸ್ಥಿರತೆಯಿಂದ ಕೂಡಿರುವ ಗುಣವನ್ನು ಉಪಯೋಗಿಸಿಕೊಂಡುನ್ಯೂಕ್ಲಿಯರ್ ರಿಯಾಕ್ತರನ್ನು ಕಟ್ಟುತ್ತಾರೆ. ಕನ್ನಡದಲ್ಲಿ ಅಣು ಕೇಂದ್ರ ಪ್ರಕ್ರಿಯಾ ಕಾರಿ ಎಂದು ಹೆಸರಿಡಬಹುದು. ಪ್ರಕ್ರಿಯೆಯೆಂದರೆ ಮತ್ತೆ - ಮತ್ತೆ ಆಗುವ ಕ್ರಿಯೆ ಎಂದು ಅರ್ಥ. ಅಣು ಕೇಂದ್ರ ಕ್ರಿಯೆಗಳು ತಮ್ಮ ಕ್ರಿಯಾ ಚಟುವಟಿಕೆಗಳಲ್ಲಿ ಶಕ್ತಿಯನ್ನು ವಿಸರ್ಜಿಸುತ್ತವೆ. ಈ ವಿಸರ್ಜಿತ ಶಕ್ತಿಯು ಅಕ್ಕ ಪಕ್ಕದ ಅಣುವಿನ ಮೇಲೆ ಬಿದ್ದುಆ ನೆರೆಹೊರೆಯ ಅಣುಗಳಲ್ಲೂ ಅಣು ಕೇಂದ್ರ ಕ್ರಿಯೆಯನ್ನು ಆಗುವ ಹಾಗೆ ಮಾಡುತ್ತವೆ. ನೀವು ಪೋಣಿಸಿದ ಆನೆ ಅಥವಾ ಕುದುರೆ ಪಟಾಕಿಯ ಸರಪಣಿಗಳನ್ನು ನೋಡಿರಬಹುದುಹಾಗೂ ದೀಪಾವಳಿಯ ಸಮಯದಲ್ಲಿ ಇಂತಹ ಪಟಾಕಿಗಳನ್ನು ಹೊಡೆದಿರಬಹುದು. ನೀವು ಆ ಸರಪಣಿಯ ಯಾವುದೇ ಒಂದು ಪಟಾಕಿಯನ್ನು ಮಾತ್ರ ಹತ್ತಿಸಿದರೆ ಸಾಕುಒಂದರಿಂದ ಇನ್ನೊಂದೋಎರಡೋಹೆಚ್ಚೋ ಹತ್ತಿಕೊಂಡುಎಲ್ಲವೂನೆಮ್ಮ ಕಣ್ಣ ಮುಂದೆಯೇ ಪಠ-ಪಠಾರೆಂದು ಹೊಡೆದು ಹೋಗುತ್ತದೆ. ಹಾಗೆಯೇಅಣು ಕೇಂದ್ರದಲ್ಲಿ ಸರಪಣಿ ಕ್ರಿಯೆಗಳು ಆಗುತ್ತವೆ.

ಈ ಪ್ರಕ್ರಿಯಾ ಕಾರಿಯ ಗರ್ಭವನ್ನು ಯುರೇನಿಯಮ್ ಇತ್ಯಾದಿ ಅತಿ ಭಾರ ಅಣುಗಳಿಂದ ಮಾಡಿರುತ್ತಾರೆ. ಅತಿಭಾರ ಅಣು ವಸ್ತುಗಳಿಂದ ಮಾಡಿರುವುದಲ್ಲದೆಅಣು ಕೆಂದ್ರ ಕ್ರಿಯೆಯನ್ನು ಪ್ರಾರಂಭಿಸಿದ ಮೇಲೆಸರಪಣಿ ಪ್ರಕ್ರಿಯೆಗಳು ಆಗಿ ಅಗಾಧವಾದ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. ಈ ಶಕ್ತಿಯು ವಿವಿಧ ರೂಪಗಳಲ್ಲಿ ಉತ್ಪತ್ತಿಯಾಗುತ್ತವೆ. ಈ ಶಕ್ತಿಯಲ್ಲಿ ಶಾಖವು ಪ್ರಮುಖ ಮತ್ತು ಬಹು ಉಪಯೋಗಿ.
ಅಣು ಕೇಂದ್ರ ಪ್ರಕ್ರಿಯಾಕಾರಿಯಿಂದ ನೂರು - ಸಾವಿರ ಮೆಗಾ ವಾಟುಗಳಷ್ಟು ಶಾಖವು ಉತ್ಪತ್ತಿಯಾಗುತ್ತದೆ. ಒಂದು ಮೆಗಾ ಎಂದರೆಒಂದು ಬರೆದು ಅದರ ನಂತರ ಆರು ಸೊನ್ನೆಗಳನ್ನು ಬರೆಯ ಬೇಕು. ಗಿಗಾ ಎಂದರೆ ಸಾವಿರ ಮೆಗಾ ವಾಟುಗಳು. ಒಂದು ಬರೆದು ಒಂಬತ್ತು ಸೊನ್ನೆಗಳನ್ನು ಬರೆದರೆ ಗಿಗಾ ಆಗುತ್ತದೆ.

ಶಾಖದಿಂದ ಒಂದು ಬೃಹತ್ ಹಂಡೆಯಲ್ಲಿ ನೀರನ್ನು ಕುದಿಸಿನೀರಿನ ಆವಿಯನ್ನು ಉತ್ಪಾದಿಸಿಬೃಹತ್ ವಿದ್ಯುತ್ ರಾಟೆಗಳನ್ನು ತಿರುಗಿಸುವರು. ಈ ಬೃಹತ್ ವಿದ್ಯುತ್ ರಾಟೆಗಳು ವಿದ್ಯುತ್ಕಾಂತ - ಅಯಸ್ಕಾಂತ ಗಳ ಪರಸ್ಪರ ಉತ್ಸಾಹಕರಣ ಭೌತ ತತ್ವಗಳಿಂದ ಕೂಡಿದ್ದುಆವಿ ಶಕ್ತಿಯಿಂದ ತಿರುಗಿ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ. ಇಂತಹ ರಾಟೆಗೆ "ಆವಿ ರಾಟೆ" ಎನ್ನೋಣ.

ಒಂದೊಂದು ಶಕ್ತಿ ಪರಿವರ್ತನಾ ಕ್ರಿಯಾ ಹೆಜ್ಜೆಯಲ್ಲೂ ಒಂದು ರೀತಿಯ ಶಕ್ತಿಯು ನೂರರಲ್ಲಿ ಶೇಕಡ ಭಾಗ ಮಾತ್ರ ಪರಿವರ್ತಿತವಾಗುತ್ತದೆ. ಮಿಕ್ಕ ಭಾಗವು ಬಹಳ ಸಾರಿ ಉಪಯೋಗಕ್ಕೆ ಬರುವುದಿಲ್ಲ. ಶಕ್ತಿ ಪರಿವರ್ತನ ಕ್ರಿಯೆ ಯಾವುದು ಎಂದು ಪ್ರಸ್ತಾಪಿಸಿದಾಗ ಮಾತ್ರ ಶೇಕಡದಲ್ಲಿ ಎಷ್ಟು ಉಪಯೊಗ ಯೋಗ್ಯ ಎಂಬುದನ್ನು ಲೆಕ್ಕ ಹಾಕ ಬಹುದು. ಒಂದು ಮೆಗಾ ವಾಟು ವಿದ್ಯುತ್ ಶಕ್ತಿಯಿಂದ ಸುಮಾರು ಸಾವಿರ ಭಾರತೀಯ ಮನೆಗಳಿಗೆ ವಿದ್ಯುತ್ತು ಒದಗಿಸಬಹುದು. 
ಅಣು ಕೇಂದ್ರ ಪ್ರಕ್ರಿಯಾಕಾರಿಯಲ್ಲಿಶಾಖವಲ್ಲದೆವಿಸ್ತಾರೀ ಕಿರಣ ಶಕ್ತಿಯೂ ಉತ್ಪತ್ತಿಯಾಗುತ್ತದೆ. ಉದಾಹರಣೆಗೆಆಲ್ಫ಼ಬೀಟಗ್ಯಾಮನ್ಯೂಟ್ರಿನೋ ಮುಂತಾದ ಕಿರಣಗಳು ಹುಟ್ಟಿದಾಕ್ಷಣ ಎಲ್ಲ ದಿಕ್ಕಿನಲ್ಲೂ ವಿಸ್ತರಿಸುತ್ತವೆ. ಈ ಕಿರಣಗಳಿಗೆ ವಿಸ್ತಾರೀ ಕಿರಣಗಳೆಂದು ಕರೆಯಬಹುದು. ಬೆಳಕೂ ಅಷ್ಟೇ! ಅದೂ ವಿಸ್ತಾರೀ ಕಿರಣ ಶಕ್ತಿ. ಈ ವಿಸ್ತಾರೀ ಕಿರಣಗಳಿಗೆ ಅಗಾಧವಾದ ಶಕ್ತಿಯಿದ್ದುಅತಿ ವೇಗದಲ್ಲಿ ಓಡುತ್ತವೆ. ತಮ್ಮ ದಾರಿಯಲ್ಲಿ ಸಿಕ್ಕಿದ ವಸ್ತುಗಳ ಮೇಲೆಪ್ರಮುಖವಾಗಿಆ ವಸ್ತುಗಳ ಅಣು ಕೇಂದ್ರದಲ್ಲಿರುವ ಪೋಟಾನಿನ ಮೇಲೆಮತ್ತೆ ಕೆಲವು ಸಾರಿ ನ್ಯೂಟ್ರಾನಿನ ಮೇಲೆಅವುಗಳಲ್ಲಿ ಇನ್ನೂ ಕೆಲವು ಎಲಕ್ಟ್ರಾನಿನ ಮೇಲೂ ಬಿದ್ದು ಪರಸ್ಪರ ಕ್ರಿಯೆಯನ್ನು ನಡೆಸುತ್ತವೆ. ಈ ವಿಸ್ತಾರೀ ಕಿರಣಗಳು ಮಾನವ ಮತ್ತು ಪ್ರಾಣಿ ಕುಲಗಳಿಗೆ ಹಾನಿ.

ಈ ಅತೀವ್ರ ಮತ್ತು ಸುಲಭವಾಗಿ ತಡೆಯಲಾಗದ ವಿಸ್ತಾರೀ ಮತ್ತು ಅತೀ ಕ್ರಿಯಾಕಾರಿ ಕಿರಣಗಳನ್ನು ತಡೆಹಾಕುವುದು ಅಣು ಕೇಂದ್ರ ಪ್ರಕ್ರಿಯಾಕಾರಿಗಳ ವಿಜ್ಙಾನಿಗಳ ಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಅದಕ್ಕೆಸೀಸ ಇತ್ಯಾದಿ ಲೋಹಮತ್ತಿತರ ವಿಶೇಷ ವಸ್ತುಗಳನ್ನು ಉಪಯೊಗಿಸಿಹತ್ತಾರಿ ಅಡಿ ದಪ್ಪದ ಗೊಡೆಗಳನ್ನು ಕಟ್ಟಿ ಮಾನವ ಹಾನಿ ವಿಸ್ತಾರೀ ಕಿರಣಗಳನ್ನು ತಡೆ ಹಾಕುತ್ತಾರೆ.

ಅಣು ಶಕ್ತಿಯು ಮಾನವನಿಗೆ ಬಹಳ ಉಪಕಾರಿಯಾಗಿದೆಅಣು ಶಕ್ತಿಯನ್ನು ಉತ್ಪಾದಿಸುವಾಗ ನಿಯಂತ್ರಣವು ಮಾತ್ರ ಅತಿ ಮುಖ್ಯ. ಶಕ್ತಿಯು ಬಹು ರೂಪಿ: ಗಂಗೆವಾಯುಅಗ್ನಿಶಬ್ದವಿದ್ಯುತ್ಸೂರ್ಯ ಇವೆಲ್ಲಾ ಪ್ರಕೃತಿ ಮಾತೆಯ ಶಾಕ್ತ ರೂಪಗಳಂತೆಅಣು ಶಕ್ತಿಯು ಇವೆಲ್ಲಗಳಿಗೂ ಮೂಲ ರೂಪಿಮೂಲ ಕಾರಣ.

ಬೇರೆಲ್ಲಾ ಶಕ್ತಿ ರೂಪಗಳಿಗೆ ದೇಗುಲಗಳನ್ನು ಕಟ್ಟುವ ಹಾಗೆಮಾನವನು ಅಣು ಶಕ್ತಿಗೆ ಪ್ರಕ್ರಿಯಾಕಾರಿ ಮಹಾ ದೇವಾಲಯವನ್ನು ನಿರ್ಮಿಸಿಶಕ್ತಿ ಆರಾಧಕನಾಗಿದ್ದಾನೆ ಅಲ್ಲವೇಎಲ್ಲವೂ ನಿಮ್ಮ ಅಂತರ್ದೃಷ್ಟಿ ಹೇಗಿದೆಯೋ ಅಂತೆಯೇ: ಒಂದು ಕಣ್ಣಿಗೆ ಮಹಾ ಯಂತ್ರಧೀಮಂತ ತಂತ್ರ. ಒಳಗಣ್ಣಿಗೆ ಶಕ್ತಿ ಆರಾಧನಾ ಅಭಿಯಂತ್ರ!

ಕೈಮುಗಿದು ಬನ್ನಿಮನ ಬಿಚ್ಚಿ ತಿಳಿಯೋಣವೆನ್ನಿಸತ್ಯವನ್ನು ಅರಸುವಚಿತ್ತದಿಂದ ಅಧ್ಯಯಿಸುವಪ್ರಕೃತಿಯ ಗುಟ್ಟು ಕಂಡಾಗ ಆನಂದಿಸುವ ವಿಜ್ಙಾನಿಯ ನಿತ್ಯ ಅಚ್ಚರಿಯ ವ್ರತವು ಸತ್ - ಚಿತ್ - ಆನಂದವಲ್ಲದೆ ಬೇರೇನೂ ಅಲ್ಲ. ಅಚ್ಚರಿಯ ಆಚಾರದ ಕಂಕಣ ಕಟ್ಟಿದವರು ವಿಜ್ಙಾನಾಚಾರ್ಯರು. 

ನ್ಯೂಟ್ರಿನೊ ಮಹಾತ್ಮೆ

ನ್ಯೂಟ್ರಿನೊ ಮಹಾತ್ಮೆ
ಡಾಕ್ತರ್ ಕೆ. ಆರ್. ಎಸ್. ಮೂರ್ತಿ

ಮಟ ಮಟ ಮಧ್ಯಾನ್ಹದಲ್ಲಿ ನಿಮ್ಮ ಮೇಲೆ, ಪ್ರತಿ ಚದುರ ಸೆಂಟಿ ಮೀಟರಿನ ಮೇಲೂ, ಸುಮಾರು ಅರವತ್ತೈದು ಬಿಲಿಯನ್ನು ನ್ಯೂಟ್ರಿನೊಗಳು ತುಂತುರು ಸ್ನಾನ ಮಾಡಿಸುತ್ತವೆ. ಭೂಮಿಯ ಮೇಲೆ ಸುರಿಯುವ ಈ ನ್ಯೂಟ್ರಿನೊಗಳು ಪ್ರಮುಖವಾಗಿ ಸೂರ್ಯನಿಂದ ಬರುತ್ತವೆ. ಆದ್ದರಿಂದ, ಸೂರ್ಯನು ಎಲ್ಲಿ ಭೂಮಿಯ ಮೇಲೆ ಎಲ್ಲಿಲ್ಲಿ, ಯಾವಾಗ ನೇರವಾಗಿ ತಲೆಯ ಮೇಲೆ ಕಾಣ ಬರುತ್ತಾನೋ ಅಲ್ಲೆಲ್ಲಾ ಇಷ್ಟೊಂದು ನ್ಯೂಟ್ರಿನೊ ಸುರಿಮಳೆ ಅತೀವ್ರ; ಮಿಕ್ಕೆಲ್ಲ ಸಮಯದಲ್ಲಿ ಸೂರ್ಯನು ಇರುವಾಗಿನ ಭೂಮಿಯ ಭಾಗದಲ್ಲೆಲ್ಲಾ ಅತೀವ್ರ ಅಲ್ಲದಿದ್ದರೂ, ಬಹಳವೇ ನ್ಯೂಟ್ರಿನೊಗಳು ಬೀಳುತ್ತಿರುತ್ತವೆ

ಅರವತ್ತೈದು ಬಿಲಿಯನ್ನು ಅಂದರೆ, ೬೫ ಬರೆದು ನಂತರ ಒಂಬತ್ತು ಸೊನ್ನೆ ಬರೆಯಬೇಕು. ಸೂರ್ಯನಿಂದ ಬೆಳಕು ನಮ್ಮ ಮೇಲೆ ಬೀಳುವುದು ನಮಗೆ ಗೊತ್ತಿದೆ. ಏಕೆಂದರೆ ಬೆಳಕು ನಮ್ಮ ಕಣ್ಣಿಗೆ ಕಾಣುತ್ತದೆ. ಬೆಳಕು ವಿದ್ಯುತ್ - ಅಯಸ್ಕಾಂತ ಸ್ಪಂದನ ರೂಪ ಮತ್ತು ಅದಕ್ಕೆ ಸಹಜವಾದ ಪ್ರತಿಕ್ರಿಯೆಯನ್ನು ಅದು ಬೀಳುವ ಮತ್ತು ಚಲಿಸುವ ಕಡೆಯಲ್ಲೆಲ್ಲಾ ಪ್ರದರ್ಶಿಸುವುದರಿಂದ, ಬೆಳಕು ತನ್ನ ವಿದ್ಯುತ್ ಕಾಂತ ಮತ್ತು ಅಯಸ್ಕಾಂತ ಗುಣದ ಮೂಲಕ ಎಲ್ಲ ವಸ್ತುಗಳ ಮೇಲೂ ಪರಸ್ಪರ ಪ್ರಭಾವವನ್ನು ಬೇರುತ್ತದೆ. 

ಆದರೆ, ನ್ಯೂಟ್ರಿನೊ ಮಾತ್ರ ವಿದ್ಯುತ್ ಕಾಂತ ಅಥವಾ ಅಯಸ್ಕಾಂತ ರಹಿತ. ಆದ್ದರಿಂದ, ಅದು ನಮ್ಮ ಮೇಲೆಯಾಗಲೀ, ಯಾವುದೇ ವಸ್ತುವಿನ ಮೇಲೆಯಾಗಲೀ ಬಿದ್ದರೂ, ಸ್ವಲ್ಪವೂ ಪ್ರತಿಕ್ರಯಿಸದೆ ತೂರಿ ಹೊರಗೆ ಹೋಗಿ ಬಿಡುತ್ತದೆ. ಅದು ಚಲಿಸುವ ದಾರಿಯಲ್ಲೂ ಅದಕ್ಕೆ ಪ್ರತಿಕ್ರಿಯೆಯಿಂದ ನಿರ್ವಾಣ!

ಬೆಳಕು, ಉದಾಹರಣೆಗೆ ಗಾಜು, ಪಾರದರ್ಶಕ ವಸ್ತುಗಳ ಮೂಲಕ ಸುಲಭವಾಗಿ ತೂರಿ ಹೋಗುತ್ತದೆ. ಆದರೆ, ಪಾರ ದರ್ಶಕದ ಮೇಲೆ ಬಿದ್ದ ಬೆಳಕು ಶೇಕಡ ನೂರರಷ್ಟು ತೂರಿ ಹೋಗುವುದಿಲ್ಲ. ಅಪಾರ ದರ್ಶಕ ವಸ್ತುಗಳು ಅನೇಕ. ಅಪಾರ ದರ್ಶಕ ವಸ್ತುಗಳು ಬೆಳಕಿಗೆ ತೂರಿ ಹೋಗಲು ಬಿಡುವುದಿಲ್ಲ. 

ನ್ಯೂಟ್ರಿನೊ ವಿದ್ಯಮಾನಗಳೇ ಬೇರೆ. ಭೂಮಿಯ ಮೇಲೆ ಬಿದ್ದ ಎಲ್ಲಾ ನ್ಯೂಟ್ರಿನೊ ಚಕ್ಕನೆ ತೂರಿ ಪರಾರಿ! ಸೂರ್ಯನ ಒಳಭಾಗದಲ್ಲಿ ಹುಟ್ಟುವ ನ್ಯೂಟ್ರಿನೊ ಸೂರ್ಯನ ಮೈಯೊಳಗಿಂದಲೇ ಕಿಂಚಿತ್ತೂ ಅಡೆ - ಚಡೆ ಇಲ್ಲದೆ ಹೊರಗೆ ಬಂದು ಎಲ್ಲಾ ದಿಕ್ಕಿನಲ್ಲೂ ವಿಸ್ತರಿಸುತ್ತದೆ. ಆದರೆ, ಅಚ್ಚರಿಯೆಂದರೆ, ಬೆಳಕು ಕೂಡ ಅಷ್ಟು ಸುಲಭವಾಗಿ ಸೂರ್ಯನ ಮೈಯನ್ನು ಬೇಧಿಸಿ ತಪ್ಪಿಸಿ ಕೊಳ್ಳಲಾರದು. 

ನ್ಯೂಟ್ರಿನೊ ಮಹಾ ಕಣಕ್ಕೆ, ಇಲ್ಲಿ ಮಹಾನ್ ಚಿಕ್ಕದೆಂದೂ, ಮಹಾನ್ ಗುಣಗಳೆಂದೂ ಅರ್ಥ ಮಾಡಿಕೊಳ್ಳಿ, ತಡೆ ಹಾಕುವುದು ಸೃಷ್ಟಿಯಲ್ಲಿ ಯಾವುದೂ ಇಲ್ಲ. ಇದೇ ಕಾರಣದಿಂದಲೇ ವಿಜ್ಞಾನಿಗಳು ಯಾವ ಯಂತ್ರ - ಉಪಕರಣಗಳನ್ನು ಉಪಯೋಗಿಸಿ ನ್ಯೂಟ್ರಿನೊ ಸಂಶೋಧನೆ ಮಾಡ ಬೇಕೆಂಬುದೇ ಸುಲಭವಾಗಿ ಅರಿಯದೆ ತಲೆ ಕೆಡೆಸಿಕೊಂಡಿದ್ದಾರೆ. 

ವಿಜ್ಞಾನಿಗಳು ಅಂದರೆ ತಲೆ ಕೆದರಿಸಿ ಕೊಂಡಿರುವ, ತಮ್ಮ ಅಲಂಕಾರದ ಬಗ್ಗೆ ಕಾಳಜಿಯನ್ನೇ ಬಿಟ್ಟು "ಅಲಂಕಾರ ಸನ್ಯಾಸ" ಹೊಂದಿದವರು ಎಂದು ನಾವು ಚಲನ ಚಿತ್ರಗಳಲ್ಲೂ ಮತ್ತು ಬೇರೆ ಮಾಧ್ಯಮಗಳಲ್ಲೂ ತಿಳಿದಿದ್ದೇವೆ.  ನ್ಯೂಟ್ರಿನೊ "ಮುಖ ತಪ್ಪಿಸಿ ಕೊಂಡು" ಸೃಷ್ಟಿಯಲ್ಲೆಲ್ಲಾ ಅಲೆ ತಿರುಕನಾಗಿ ಚಲಿಸುವುದರಿಂದ, ಮತ್ತು ಚರಿಸುವುದರಿಂದ, ವಿಜ್ಞಾನಿಗಳಿಗೆ ತಲೆ ಬಿಸಿ. ಅತಿ ಆಳವಾದ ಗಣಿಗಳ ಒಳಗೂ, ಮೈಲಿಗಟ್ಟಲೆ ಮಂಜುಗಡ್ಡೆ ಪೇರಿಸಿ ಕೊಂಡಿರುವ ಭೂಮಿಯ ಧ್ರುವಗಳಲ್ಲೂ ಆಳವಾಗಿ ಕೊರೆದು ಹುಡುಕೀ - ಹುಡುಕೀ ವಿಜ್ಞಾನಿಗಳು ಅವಸ್ಥೆ ಪಡುತ್ತಿದ್ದಾರೆ. 

"ವಿದ್ಯುತ್ - ನಾಚಿಕೆ" ಇದ್ದಾಗ ಮತ್ತು ಪ್ರತಿಕ್ರಿಯೆಯೇ ಪತ್ತೆ ಇಲ್ಲವಾಗಿರುವಾಗ ನ್ಯೂಟ್ರಿನೊ ಎನ್ನುವ ಕಣದ ಇರುಹನ್ನು ಪತ್ತೆ ಹಿಡಿದದ್ದು ಹೇಗೆ? ನಿಮ್ಮ ತಲೆಯಲ್ಲಿ ಇಂತಹ ಪ್ರಶ್ನೆಯು ಬಂದಿರಲೇ ಬೇಕು! 

ವಿಜ್ಞಾನಿಗಳು ಅಣು ಲೋಕದಲ್ಲೂ, ಮತ್ತಿತರ ಖಗ ಲೋಕದಲ್ಲಿ ಚಲಿಸುವ ಮತ್ತು ಖಗ ಲೋಕದಿಂದ ಭೂಮಿಯ ಮೇಲೆ ಬೀಳುವ ಕಣಗಳನ್ನೂ ಸಂಶೋಧಿಸುವಾಗ ಪ್ರತ್ಯಕ್ಷವಾಗಿ ಮಾನವ ಲೋಕದಲ್ಲಿ ವಾಸಿಸುವ ನಮಗೆ ಸಿಗದ ಮತ್ತು ಸುಲಭವಾಗಿ ಅರಿಯದ ಸೃಷ್ಟಿಯ ಗುಟ್ಟನ್ನು ಪರೋಕ್ಷ ರೀತಿಯ ವೈಜ್ಞಾನಿಕ ರೀತಿಗಳಿಂದ ಸಂಶೋಧಿಸುತ್ತಾರೆ. ಬಹಳ ಸಾರಿ, ಗಣಿತ ಶಾಸ್ತ್ರದ ಮೊರೆ ಹೋಗುತ್ತಾರೆ. ಇಂತಹ ಸಂಶೋಧನಾ ತಂತ್ರಗಳಿಂದ ನ್ಯೂಟ್ರಿನೊ ನಂತಹ ಷಂಡ ಕಣಗಳನ್ನು ಭಂಡತನದಿಂದ ತದೇಕ ಚಿತ್ತದಲ್ಲಿ ಪರೋಕ್ಷವಾಗಿ ಪರೀಕ್ಷಿಸಿ, ಪರಿಶೀಲಿಸಿ, ಅಧ್ಯಯನವನ್ನು ಮಾಡುತ್ತಿದ್ದಾರೆ. ವಿಶೇಷ ಸಂದರ್ಭದಲ್ಲಿ ಮಾತ್ರ ನ್ಯೂಟ್ರಿನೊ ಅತಿ ಕ್ಷೀಣವಾಗಿ ಪ್ರತಿಕ್ರಿಯಿಸುತ್ತದೆ. ಮೂರು ತರಹದ ನ್ಯೂಟ್ರಿನೊ ಇವೆಯೆಂದೂ, ಅವು ಒಂದು ಸ್ಥಿತಿಯಿಂದ ಇನ್ನೊಂದಕ್ಕೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಪರಿವರ್ತನೆಗೊಳ್ಳುತ್ತದೆ ಎಂದೂ ವಿಜ್ಞಾನಿಗಳು ನಿರ್ಧರಿಸಿದ್ದಾರೆ.

ರೇಡಿಯೋ ಆಕ್ಟಿವ್ ಡಿಕೇ ಸಮಯದಲ್ಲಿ ಹುಟ್ಟುವ ನ್ಯೂಟ್ರಿನೊ ನ್ಯೂಕ್ಲಿಯರ್ ರಿಯಾಕ್ಟರ್ ನಲ್ಲೂ 
ಹುಟ್ಟಿ ಬಹಳ ಬೇಗ ತಪ್ಪಿಸಿಕೊಂಡು ಪರಾರಿಯಾಗುತ್ತದೆ. ರಿಯಾಕ್ಟರ್ ನಲ್ಲಿ ಅಣು ಕ್ರಿಯೆಗಳಾಗುವಾಗ ಉತ್ಪನ್ನವಾದ ಶಕ್ತಿ ಗಳನ್ನೆಲ್ಲಾ ಲೆಕ್ಕ ಹಾಕಿ ನೋಡಿದರೆ, ನ್ಯೂಟ್ರಿನೊಗಳಿಗೆ ಸಂಭಂದ ಪಟ್ಟ ಶಕ್ತಿಯಲ್ಲಿ ನ್ಯೂಟ್ರಿನೊ "ಆಟಕ್ಕುಂಟು, ಲೆಕ್ಕಕ್ಕಿಲ್ಲ" ಎನ್ನುವ ಹಾಗೆ ಅದಾಗ, ಇವೆಲ್ಲಾ ನ್ಯೂಟ್ರಿನೊ ಮಹಾತ್ಮೆ ಎಂದು ವಿಜಾನಿಗಳು ಹೇಳುತ್ತಾರೆ. 

ನ್ಯೂಟ್ರಿನೊ ಸೂರ್ಯನಿಂದ ಅಲ್ಲದೆ, ಸೂಪರ್ ನೋವಾ ಇತ್ಯಾದಿ ಭೃಹತ್ ಸ್ಫೋಟವಾದಾಗ ಉತ್ಪನ್ನವಾಗಿ, ಎಲ್ಲಾ ದಿಕ್ಕಿನಲ್ಲೂ ಹರಡುತ್ತದೆ. 

ನೀವು ಸೂರ್ಯನ ಬಿಸಿಲಿನಿಂದಲೇ ತಪ್ಪಿಸಿಕೊಂಡು ಮನೆಯೊಳಗೇ ಬಚ್ಚಿಟ್ಟು ಕೊಂಡರೂ, ಗವಿಯೊಳಗೆ ತೂರಿ ಕಣ್ಣು ಮುಚ್ಚಿಕೊಂಡರೂ, ನ್ಯೂಟ್ರಿನೊ ನಿಮ್ಮ ಮೇಲೆ ಮಳೆಯನ್ನು ಸುರಿಸಿ,ನಿಮ್ಮ ಮೂಲಕ ತೂರಿ, ನಿಮಗೇ ಗೊತ್ತಾಗದಂತೆ ಓಡಿಹೋಗುತ್ತದೆ. 

ವಿಚಿತ್ರವಾದ ಅಣು ಲೋಕ

ವಿಚಿತ್ರವಾದ ಅಣು ಲೋಕ 
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ 

ಅಣುವಿನ ಕೇಂದ್ರದಲ್ಲಿರುವ ಪ್ರೋಟಾನು ಮತ್ತು ನ್ಯೂಟ್ರಾನುಗಳು ಕೇವಲ ಗಾತ್ರವೇ ಇಲ್ಲದ, ಬಿಂದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಬಿಂದುವಾದರೂ ಪ್ರೋಟಾನಿಗೆ ಧನ ವಿದ್ಯುತ್ ಕಾಂತ ವಲಯವಿರುತ್ತದೆ. ಅದರ ವಿದ್ಯುತ್ ಕಾಂತತೆಗೆ ಒಂದು ವಲಯವಿರುತ್ತದೆ. ಈ ಕಾಂತತೆಯು ಪ್ರೊಟಾನಿನ ಕೇಂದ್ರದಲ್ಲಿ ಅತಿ ತೀಕ್ಷಣವಾದ ಕಾಂತ ಪ್ರಭಾವಾವಿದ್ದು, ಅದರ ಕೇಂದ್ರದಿಂದ ದೂರ ಹೊರಗಡೆ ಹೋದಷ್ಟೂ ಅದರ ವಿದ್ಯುತ್ ಕಾಂತದ ಪ್ರಭಾವ ಅತಿ ಬೇಗನೆ ಕಡಿಮೆಯಾಗಿ ಹೋಗಿ ಬಿಡುತ್ತದೆ. ನ್ಯೂಟ್ರಾನಿಗೆ ವಿದ್ಯುತ್ ಗುಣವು ಇಲ್ಲ ಎಂದು ಪ್ರಾಥಮಿಕ ವಿಜ್ಞಾನದಲ್ಲಿ ನಾವೆಲ್ಲವೂ ಓದಿದ್ದರೂ, ನಿಜ ಗುಣವೇ ಬೇರೆ. ನ್ಯೂಟ್ರಾನು ಕೇಂದ್ರದಲ್ಲಿ ಧನ ವಿದ್ಯುತ್ ಕಾಂತ ಗುಣವನ್ನು ಹೊಂದಿದ್ದು, ಅದಕ್ಕೆ ವ್ಯತಿರಿಕ್ತವಾದ ಋಣ ವಿದ್ಯುತ್ ಗುಣ ಹೊರ ಭಾಗದಲ್ಲಿ ಇರುವುದರಿಂದ ವಿದ್ಯುತ್ ಗುಣವೇ ಇಲ್ಲವೇನೋ ಎನ್ನುವಹಾಗೆ ವರ್ತಿಸುತ್ತದೆ. ನ್ಯೂಟ್ರಾನಿನ ಈ ವಿಚಿತ್ರ ಗುಣವನ್ನು ಮತ್ತೆ ವಿಸ್ತಾರವಾಗಿ ಬೇರೆಯ ಬರಹದಲ್ಲಿ ವಿಶ್ಲೇಷಿಸೋಣ. 

ಎಲಕ್ಟ್ರಾನು ಅಣುವಿನ ಕೇಂದ್ರದ ಸುತ್ತ ಸುತ್ತಿದರೂ ಅದು ಬಹಳ ದೂರದಲ್ಲಿ ಇರುತ್ತದೆ. ಈ ದೂರವು ಎಷ್ಟು ಎನ್ನುವುದಕ್ಕೆ ಒಂದು ಉದಾಹರಣೆಯ ಕಲ್ಪನಾ ಪ್ರಸ್ತಾಪವನ್ನು ಮಾಡೋಣ:

ಮಾನವರಾದ ನಮ್ಮ ದೈನಂದಿನ ಭೌತ ಅನುಭವಗಳು ಅಣು ಗಾತ್ರದ ಮತ್ತು ಅಣು ಲೋಕದ ಭೌತ ಗುಣಗಳೂ ಬಹಳವೇ ಬೇರೆ ಇರುವುದರಿಂದ, ಇಂತಹ ಕಲ್ಪನಾ ಲೋಕದ ಸಹಾಯದಿಂದ ಇವನ್ನೆಲ್ಲಾ ಸ್ವಲ್ಪ ಸುಲಭವಾಗಿ ತಿಳಿದು ಕೊಳ್ಳ ಬಹುದ. ಹಾಗಂದ ಮಾತ್ರಕ್ಕೆ, ಇಂತಹ ಒಂದು ಉಲ್ಲೇಖವನ್ನು ಕುರುಡು ಕುರುಡಾಗಿ ಬೇರೆಲ್ಲೋ ಅನ್ವಯಿಸಿ ಕೊಳ್ಳಬಾರದು. ಎಚ್ಚರಿಕೆಯಿರಲಿ!

ಜಲಜನಕದಲ್ಲಿ ಒಂದೇ ಒಂದು ಪ್ರೋಟಾನು ಕೇಂದ್ರದಲ್ಲಿ ಇರುತ್ತದೆ. ಅದರ ಸುತ್ತ ಒಂದೇ ಒಂದು ಎಲಕ್ಟ್ರಾನು ಸುತ್ತುತ್ತಿರುತ್ತದೆ. ಈ ಪ್ರೋಟಾನಿನ ಕಾಂತ ವಲಯವೂ ಸೇರಿ, ನಮ್ಮ ಕಲ್ಪನೆಯಲ್ಲಿ ಅದನ್ನು ಗಾತ್ರದಲ್ಲಿ ಒಂದು ಬ್ಯಾಸ್ಕೆಟ್ಟು ಬಾಲಿಗೆ ಹೋಲಿಸಿದರೆ, ಮತ್ತು ಅದನ್ನು ನಮ್ಮ ಭೂಮಿಯ ಕೇಂದ್ರದಲ್ಲಿ ಇದೆ ಎಂದು ಕೊಂಡರೆ, ಎಲಕ್ಟ್ರಾನು ಭೂಮಿಯ ಹೊರ ಮೈಯಿಂದಲೂ ದೂರದಲ್ಲಿ ಆಕಾಶದಲ್ಲಿ, ಅಂದರೆ ಅಷ್ಟು ದೂರ, ಸುತ್ತುತ್ತಿರುತ್ತದೆ. 

ಎಲಕ್ಟ್ರಾನು ಎಷ್ಟು ವೇಗದಲ್ಲಿ ಸುತ್ತುತ್ತದೆ ಅಂದರೆ, ಅದು ಇಲ್ಲೇ ಇದೆ ಎಂದು ಹೇಳಲು ಆಗುವುದಿಲ್ಲ. ಇದಕ್ಕೆ ಸುಲಭವಾದ ಉದಾಹರಣೆ ಎಂದರೆ ನಾವೆಲ್ಲಾ ಶೆಕೆಯಾದಾಗ ಉಪಯೋಗಿಸುವ ಎಲಕ್ಟ್ರಿಕ್ ಫ಼್ಯಾನು. ಫ್ಯಾನು ಸುತ್ತುವಾಗ ಅದರ ಯಾವ ಬ್ಲೇಡು ಎಲ್ಲಿದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ ಅಲ್ಲವೇ! ಒಂದಾಗಲೀ, ಬೇರೆ ಅಣುಗಳಲ್ಲಿ ಹೆಚ್ಚಾಗಲೀ ಎಲಕ್ಟ್ರಾನುಗಳು ಅಣು ಕೇಂದ್ರದ ಸುತ್ತ - ಬಹಳ ದೂರದಲ್ಲಿ ಎನ್ನುವುದು ಜ್ಞಾಪಕದಲ್ಲಿ ಇರಲಿ - ಸುತ್ತುವಾಗ ವಿಜ್ಞಾನಿಗಳು ಅದಕ್ಕೆ ಎಲಕ್ಟ್ರಾನಿನ ಮೋಡ ಎನ್ನುತ್ತಾರೆ. 

ಯಾವ ಎಲಕ್ಟ್ರಾನು ಎಲ್ಲಿ ಇದೆ ಎಂದು ಹೇಳುವುದರ ಬದಲು ಅದು ಎಲ್ಲೇ ಇರುವ ಸಾಧ್ಯತೆಯನ್ನು ಗಣಿತ ಪ್ರಮಾಣದಲ್ಲಿ ಹೇಳುತ್ತಾರೆ. 

ಬಿಂಬ ಭವಕ್ಕೆ ನಿಮಗೆಲ್ಲಾ ಸ್ವಾಗತ

ಬಿಂಬ ಭವಕ್ಕೆ ನಿಮಗೆಲ್ಲಾ ಸ್ವಾಗತ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಮಹಾ ಸ್ಫೋಟ ಎನ್ನಿಬೃಹತ್ ವಿಕಾಸವೆನ್ನಿಬಿಗ್ ಬ್ಯಾಂಗ್ ಎಂದು ಇಂಗ್ಲೀಷಿನಲ್ಲಿ ಅನ್ನಿ. ಈ ವಿಜ್ಙಾನ  ಶಾಸ್ತ್ರದ ಪ್ರಕಾರ. ನಾವಿರುವ ವಿಶ್ವವು ಒಂದು ಬೃಹತ್ ಸ್ಫೋಟದಿಂದ ಉದ್ಭವವಾಯಿತು. ಈ ಶಾಸ್ತ್ರದ ಪ್ರಕಾರಭವದ ಜೊತೆಗೆಅದರ ವಿರುಧ್ಧ ಅಥವಾ ಪ್ರತಿಬಿಂಬ ಗುಣಗಳನ್ನು ಹೊಂದಿರುವ ಬಿಂಬ ಭವವೂ ಉದ್ಭವವಾಯಿತು. ಭವ ಮತ್ತು ಅದರ ಬಿಂಬಗಳ ಪ್ರಮಾಣಗಳುತದ್ವಿರುಧ್ಧವಾದರೂಸಮ ಪ್ರಮಾಣಗಳಲ್ಲಿ ಸೃಷ್ಟಿಯಾದವು. ಈ ಎರಡೂ ಒಂದನ್ನೊಂದು ಢಿಕ್ಕಿ ಹೊಡೆದಾಗ ಎರಡೂ ವಿನಾಷವಾಗಿ ಅದೃಶ್ಯವಾಗಬೆಕಾಗಿತ್ತು. ಹಾಗೇನಾದರೂ ಸಮ ಪ್ರಮಾಣದಲ್ಲಿ ಹುಟ್ಟಿ, ವಿನಾಷವಾಗಿದ್ದರೆನಾವೂನೀವೂ,ನಮ್ಮ ಸರ್ವಲೋಕವೂ ಇರುವುದು ಸಾಧ್ಯವಾಗುತ್ತಿರುವುದಿಲ್ಲ ಅಲ್ಲವೇಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ.

ನಾವಿರುವ ಭವದಲ್ಲಿ ನಮ್ಮ ಅಣು ಲೋಕದಲ್ಲಿ ಇರುವ ವಿವಿಧ ಕಣಗಳಿಗೆ ಮೂಲ ಕಣ (ಇಂಗ್ಲೀಷಿನಲ್ಲಿ ಫ಼ಂಡಮೆಂಟಲ್ ಪಾರ್ಟಿಕಲ್) ಎನ್ನುತ್ತಾರೆ. ಉದಾಹರಣೆಗೆಎಲಕ್ಟ್ರಾನು  ಒಂದು. ಅಣು ಕೇಂದ್ರದಲ್ಲಿ ಇರುವ ಪ್ರೋಟಾನು ಮತ್ತು ನ್ಯೂಟ್ರಾನುಗಳ ಒಳಗೆ ಆರು ಬಗೆಯ ಕ್ಯಾರ್ಕುಗಳು ಕೂಡ ಮೂಲ ಕಣಗಳು. ಖಗ ಲೋಕದಿಂದ ಭೂಮಿಯ ಮೇಲೆ ಬೀಳುವ ಕಣಗಳು ಬಹಳ. ಈ ಖಗ ಲೋಕದ ಕಣಗಳನ್ನು ಖಗ ಕಣ ಎನ್ನೋಣ. ಅನೇಕ ತಾರೆಗಳಲ್ಲೂನೋವಾ ಅಂತಹ ಬೃಹತ್ ಸ್ಫೋಟಗಳಲ್ಲೂ ಹುಟ್ತಿ ಎಲ್ಲೆಲ್ಲೂಎಲ್ಲ ದಿಕ್ಕಿನಲ್ಲೂ ವಿಸ್ತರಿಸಿ ಭೂಮಿಯ ಮೆಲೂ ಬೀಳುತ್ತವೆ. ನ್ಯೂಕ್ಲಿಯರ್ ರಿಯಾಕ್ಟರಿನಲ್ಲೂ ಅನೇಕ ರೀತಿಯ ಮೂಲ ಕಣಗಳು ಹುಟ್ಟುತ್ತವೆ. ಅಣು ಬಾಂಬಿನ ಸ್ಫೋಟದಲ್ಲೂ ಅನೇಕ ಮೂಲ ಕಣಗಳು ಉತ್ಪತ್ತಿಯಾಗುತ್ತವೆ. ಆಲ್ಫ಼ಬೀಟಗ್ಯಾಮ ಮೂಲ ಕಣಗಳಂತೂ ಮಾನವ ಕುಲಕ್ಕೆ ಹಾನಿ ಎಂಬುದು ನಿಮಾಗೆ ಗೊತ್ತಿರ ಬಹುದು. ಬಿಂಬ ಭವದಲ್ಲಿ ಎಲ್ಲಾ ಮೂಲ ಕಣಗಳ ಬಿಂಬ ಕಣುಗಳು ಇರುತ್ತವೆ. ಉದಾಹರಣೆಗೆಎಲಕ್ಟ್ರಾನಿನ ಬಿಂಬ ಕಣ ಪಾಸಿಟ್ರಾನು. ಎಲಕ್ಟ್ರಾನಿಗೆ ಋಣ ವಿದ್ಯುತ್ ಗುಣ; ಪಾಸಿಟ್ರಾನಿಗೆ ಧನ ವಿದ್ಯುತ್ ಗುಣ. ಹೀಗೆಯೇ ಭವದ ಎಲ್ಲಾ ಭೌತ ಗುಣಗಳಿಗೆ ಬಿಂಬ ಗುಣಗಳು ಬಿಂಬ ಭವದಲ್ಲಿ ಇರುತ್ತವೆ. ನೀವು ಕನ್ನಡಿಯ ಮುಂದೆ ನಿಂತು ಬಲಗೈ ಓಡಾಡಿಸಿದರೆ ಬಿಂಬದಲ್ಲಿರುವ ನೀವು ಎಡಗೈಯನ್ನು ಓಡಾಡಿಸಿದ ಹಾಗೆ.

ಆರು ಬಗೆಯ ಕ್ವಾರ್ಕು ಗಳಿಗೂ ಬಿಂಬ ಕ್ವಾರ್ಕುಗಳು ಇರುತ್ತವೆ. ಪ್ರೋಟಾನು ಮತ್ತು ನ್ಯೂಟ್ರಾನು ಆರು ಕ್ವಾರ್ಕು ಗಳಿಂದ ಮಾಡಲ್ಪಟ್ಟಿರುವುದರಿಂದ ಅವಕ್ಕೆ ಸಂಯುಕ್ತ ಕಣ ಏನ್ನುತ್ತಾರೆ. ಇಂತಹ ಸಂಯುಕ್ತ ಕಣಗಳಿಗೂ ಬಿಂಬ ರೂಪಿ ಸಂಯುಕ್ತ ಕಣಗಳು ಇರುತ್ತವೆ. ಇವಕ್ಕೆ ಬಿಂಬ ಪ್ರೋಟಾನು ಮತ್ತು ಬಿಂಬ ನ್ಯೂಟ್ರಾನು ಎಂದು ಹೆಸರಿಡೋಣ.

ನನಗಂತೂ ವಿಜ್ಙಾನತಂತ್ರ ಜ್ಙಾನವ್ಯಾಪಾರ ಶಾಸ್ತ್ರ ಮತ್ತಿತರ ಶಾಸ್ತ್ರಗಳಲ್ಲಿ ಹೊಸ ಪದಗಳನ್ನು ಹೊಸೆದು ನಾಮಕರಣ ಮಾಡುವನಾಮಕರಣ ದಾತನಾಗಿ ಬರಹಗಳನ್ನು ಬರೆಯುವುದೂಭಾಷಣಗಳನ್ನು ಕೊಡುವುದೂ ಇಷ್ತವಾದದ್ದು. ಕೆಲವು ದಶಕಗಳಿಂದ ನಾಮಕರಣ ಕಾರಣನಾಗಿ ನಮ್ಮ ಅಚ್ಚುಮೆಚ್ಚಿನ ಕನ್ನಡದಲ್ಲೂಈ ಪದಗಳು ಸಂಕೃತ ಮೂಲದಿಂದ ಹುಟ್ಟಿರುವುದರಿಂದಇತರ ಭಾರತೀಯ ಭಾಷೆಗಳಲ್ಲೂ,ಶಬ್ಧ ಬಂಡಾರವನ್ನು ಬೆಳೆಸುವುದು ಮನಸ್ಸಿಗೆ ಸಂತಸವನ್ನು ತರುವ ಕೆಲಸ.